ಮುಂದಿನವಾರ ‘ನೀನಾದೆ ನಾ ಬಿಡುಗಡೆ
Posted date: 08 Wed, Oct 2014 – 10:25:41 AM

ಡೈನಾಮಿಕ್ ವಿಷನ್ಸ್ ಲಾಂಛನದಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ಅರ್ಪಿಸುವ ಚಂದ್ರದೇವರಾಜ್ ಅವರು ನಿರ್ಮಿಸಿರುವ ‘ನೀನಾದೆ ನಾ ಚಿತ್ರ ಮುಂದಿನವಾರ (ಅಕ್ಟೋಬರ್ ೧೭)ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಕಂದಾಸ್ ನಿರ್ದೇಶನದ ಈ ಚಿತ್ರದ ನಾಯಕರಾಗಿ ಪ್ರಜ್ವಲ್‌ದೇವರಾಜ್ ಅಭಿನಯಿಸಿದ್ದಾರೆ. ಪ್ರಿಯಾಂಕ ಕಂಡ್ವಾಲ್ ಹಾಗೂ ಅಂಕಿತಾಮಹೇಶ್ವರಿ ಈ ಚಿತ್ರದ ನಾಯಕಿಯರು. ಅವಿನಾಶ್, ಬುಲೆಟ್‌ಪ್ರಕಾಶ್, ಕೆ.ಎಸ್.ಶ್ರೀಧರ್, ಪವಿತ್ರಲೋಕೇಶ್, ಪನ್ನಗಾಭರಣ, ಯತಿರಾಜ್, ಅಭಿಜಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
 ಅರ್ಜುನ್‌ಜನ್ಯ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಶ್ರೀನಿವಾಸ್‌ರಾಮಯ್ಯರ ಛಾಯಾಗ್ರಹಣವಿದೆ. ಸುರೇಶ್ ಸಂಕಲನ, ಥ್ರಿಲ್ಲರ್‌ಮಂಜು ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಶ್ರೀಕಾಂತ್ ಹಾಗೂ ಕಂದಾಸ್ ಸಂಭಾಷಣೆ ಬರೆದಿದ್ದಾರೆ. ಪ್ರಣಾಮ್ ದೇವರಾಜ್ ಈ ಚಿತ್ರದ ಸಹ ನಿರ್ಮಾಪಕರು.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed